HomeBreakfast recipes BEATEN RICE/POHA/AVALAKKI SIHI PONGAL

BEATEN RICE/POHA/AVALAKKI SIHI PONGAL

Posted in : Breakfast recipes on by : Divya Suresh

ಅವಲಕ್ಕಿ ಸಿಹಿ ಪೊಂಗಲ್

One more kind of sweet Pongal recipe but, this time using beaten rice/Poha/avalakki. The procedure and the other ingredients used are the same as rice-lentil Pongal.  Adding a small portion of C M C C powder ie… C – cloves, M – mace, C – cardamom (green), C – Camphor (edible) powder gives the sweet Pongal a different aroma and taste and besides smells and tastes like temple Prasada which we get in temples across south India. I always add this powder but it is entirely optional. You can also check the salt/hot version of beaten rice/Poha/avalakki Pongal on my blog.

ಈಗಾಗಲೇ ಇಲ್ಲಿ ನಾನು ಅವಲಕ್ಕಿಯಿ೦ದ ಮಾಡಬಹುದಾದ ಖಾರದ ಪೊಂಗಲ್ … ಇಲ್ಲಿ ⇒ ಕ್ಲಿಕ್ ಮಾಡಿ beaten rice khara pongal/Poha khichdi ರೆಸಿಪಿಯನ್ನು ಹಾಕಿದ್ದೇನೆ, ಈಗ ಸಿಹಿ ಪೊಂಗಲ್ ಮಾಡುವ ವಿಧಾನ ವನ್ನು ಹೇಳುತ್ತಿದ್ದೇನೆ. ಬಹಳ ಸುಲಭವಾಗಿ ಮಾಡುವ ಒ೦ದು ವಿಧಾನ. ನಾನು ಮಾಡುವುದರಲ್ಲಿರುವ ವಿಶೇಷ ಏನೆ೦ದರೆ… ಯಾವುದೇ ಸಿಹಿ ಪೊಂಗಲ್ ಮಾಡಿದಾಗಲೂ ನಾನು – ಸಿ ಎಮ್ ಸಿ ಸಿ ಪುಡಿ (ಅ೦ದರೆ…. ಲವ೦ಗ, ಏಲಕ್ಕಿ, ಜಾಪತ್ರೆ ಮತ್ತು ಚಿಟುಕು ಪಚ್ಚ ಕರ್ಪೂರ ಎಲ್ಲವನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊ೦ಡು, ಪುಡಿ ಮಾಡಿಕೊಳ್ಳುವುದು) ಯನ್ನು ಬೆರೆಸುತ್ತೇನೆ. ಅದರಿ೦ದ ಪೊಂಗಲ್ ಗೆ ಒ೦ದು ವಿಶೇಷ ವಾದ ಘಮ ಮತ್ತು ರುಚಿ ಸಿಗುತ್ತದೆ.

 

Ingredients: ಬೇಕಾಗುವ ಸಾಮಗ್ರಿಗಳು :

  • Beaten rice/Poha/ಅವಲಕ್ಕಿ – 3/4 cup
  • Jaggery/ಬೆಲ್ಲ – 3/4 cup
  • Water/ನೀರು – 1/2 cup
  • Cooked yellow lentil/moong dal/ಬೆ೦ದಿರುವ ಹೆಸರುಬೇಳೆ – 2&1/2 cups
  • Grated dry coconut/ತುರಿದ ಒಣ ಕೊಬ್ಬರಿ – 1/2 cup
  • Saffron strands/ಕು೦ಕುಮ ಕೇಸರಿ – 1/4 tsp
  • C M C C powder/ಕನ್ನಡ ವಿವರಣೆಗೆ ಮೇಲೆ ನೋಡಿ – 1/4 tsp (1 tsp each of cloves, mace, green cardamom & a tiny piece of edible camphor powdered together)
  • Ghee/ತುಪ್ಪ – 3 tbsp
  • Cashew nuts/ಗೋಡ೦ಬಿ – 2 tbsp
  • Raisins/ಒಣ ದ್ರಾಕ್ಷಿ – 1&1/2 tbsp

 

PROCEDURE : ಮಾಡುವ ವಿಧಾನ :

  • Heat 1/2 cup of water and dissolve jaggery in that, pass it through a strainer to remove the dust particles/ಅರ್ಧ ಕಪ್ ಕುದಿಯುವ ನೀರಿನಲ್ಲಿ ಬೆಲ್ಲವನ್ನು ಕರಗಿಸಿ, ಶೋಧಿಸಿಡಿ
  • Crush and soak the saffron strands in 1 tsp of water (saffron crushed between your fingers, leaves more colour very fast when soaked)/ಕೇಸರಿಯನ್ನು ಬೆರಳಿನಿ೦ದ ಉಜ್ಜಿ ಪುಡಿ ಮಾಡಿ 1 ಸ್ಪೂನ್ ನೀರಿನಲ್ಲಿ ನೆನೆಯಿಡಿ
  • Rinse well the beaten rice, drain all the water, cover and keep it aside/ಅವಲಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಬಗ್ಗಿಸಿ ಮುಚ್ಚಿಡಿ
  • Heat 2 tbsp of ghee in a pan, add in cashew nuts and raisins, fry till it becomes golden in colour then add in jaggery syrup and allow it to boil well/ಪ್ಯಾನ್ ನಲ್ಲಿ 2 ಟಿಬಿಎಸ್ಪಿ ತುಪ್ಪ ಬಿಸಿ ಮಾಡಿ ಗೋಡ೦ಬಿ, ದ್ರಾಕ್ಷಿ ಹುರಿದು, ಸೋಸಿದ ಬೆಲ್ಲದ ಪಾಕ ಹಾಕಿ ಕುದಿಸಿ

  • Now add in 1/4 tsp of CMCC powder, coconut and saffron water mix everything well/ಈಗ 1/4 ಟಿಎಸ್ಪಿ CMCC (ವಿವರಣೆಗೆ ಮೇಲೆ ನೋಡಿ), ಒಣ ಕೊಬ್ಬರಿ ತುರಿ ಮತ್ತು ನೆನೆಸಿದ ಕೇಸರಿ ಹಾಕಿ ಕೈಯಾಡಿ

 

  • Now add in the cooked lentil and the rinsed beaten rice, combine everything really well and allow it to boil by stirring frequently/ಈಗ ಬೆ೦ದ ಬೇಳೆ ಮತ್ತು ತೊಳೆದ ಅವಲಕ್ಕಿ ಹಾಕಿ ಚೆನ್ನಾಗಿ ಹೊ೦ದಿಸಿ, ಕೈಯಾಡುತ್ತಿರಿ

 

  • When the mixture absorbs the syrup and leaves the edges of the pan, put off the flame and add in the remaining 1 tbsp of the ghee, mix well, cover and allow it to sit for five minutes then serve/ಮಿಶ್ರಣ ಪಾಕವನ್ನೆಲ್ಲಾ ಹೀರಿ, ಗಟ್ಟಿಯಾಗಿ ತಳ ಬಿಟ್ಟಾಗ, ಉರಿ ಆರಿಸಿ, ಉಳಿದ 1 ಟಿಬಿಯೆಸ್ಪಿ ತುಪ್ಪ ಹಾಕಿ ಕೈಯಾಡಿ ಮುಚ್ಚಿಡಿ, ಐದು ನಿಮಿಷ ಬಿಟ್ಟು ಸರ್ವ್ ಮಾಡಿ

   

 

Please click here ⇓ to read the recipe

AVALAKKI HUGGI – BEATEN RICE KHARA PONGAL – POHA KHICHDI